Kannada Actor Jaggesh has taken his twitter account to criticize Ramya for her POT comment against PM Narendra Modi.
ಎಣ್ಣೆ-ಸೀಗೆಕಾಯಿ ಹೆಂಗೋ.. ಹಾವು-ಮುಂಗುಸಿ ಹೆಂಗೋ.. ನವರಸ ನಾಯಕ ಜಗ್ಗೇಶ್ ಹಾಗೂ ನಟಿ, ಮಾಜಿ ಸಂಸದೆ ರಮ್ಯಾ ಕೂಡ ಹಂಗೆ.! 'ನೀರ್ ದೋಸೆ' ಸೆಟ್ ನಿಂದ ನಟಿ ರಮ್ಯಾ ಹೊರಗೆ ಬಂದ್ಮೇಲೆ ಜಗ್ಗೇಶ್ ಹಾಗೂ ರಮ್ಯಾ ನಡುವೆ ಅಷ್ಟಕಷ್ಟೆ. ಇವರಿಬ್ಬರ ನಡುವೆ ಆಗಾಗ ಟ್ವಿಟ್ಟರ್ ವಾರ್ ನಡೆಯುತ್ತಲೇ ಇರುತ್ತೆ. ಪಾಕ್ ಬಗ್ಗೆ ರಮ್ಯಾ ಹೊಗಳಿದಾಗ, ಜಗ್ಗೇಶ್ ಛೀಮಾರಿ ಹಾಕಿದ್ದು ನಿಮಗೆ ನೆನಪಿರಬಹುದು. ಇದೀಗ ಮತ್ತೊಮ್ಮೆ ರಮ್ಯಾ ವಿರುದ್ಧ ಜಗ್ಗೇಶ್ ತಿರುಗಿ ಬಿದ್ದಿದ್ದಾರೆ. ''ಪ್ರಧಾನಿ ಮೋದಿ ನಶೆಯಲ್ಲಿದ್ದಾರೆ'' ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯೂ ಆಗಿರುವ ರಮ್ಯಾ ಮಾಡಿದ್ದ ಟ್ವೀಟ್ ಇದೀಗ ವಿವಾದದ ಕೇಂದ್ರ ಬಿಂದು ಆಗಿದೆ. ಇದೇ ಟ್ವೀಟ್ ನಿಂದಾಗಿ ಜಗ್ಗೇಶ್ ಕೂಡ ಕೆರಳಿದ್ದಾರೆ. ಪರಿಣಾಮ, ಜಗ್ಗೇಶ್ ಬಾಯಿಂದ 'ಪಲ್ಲಂಗ' ಹಾಗೂ 'ಪಾರ್ಟಿ' ಮಾತು ಬಂದಿದೆ. ಸಂಪೂರ್ಣ ವರದಿ ಇಲ್ಲಿದೆ.